ಕನ್ನಡ ವಾರ್ತೆಗಳು

(Updated Every 15 minutes)
Share    

ಉತ್ತರಪ್ರದೇಶ ಚುನಾವಣೆ ಫಲಿತಾಂಶ: ಮೋದಿ ಬಗ್ಗೆ ರಾಹುಲ್ ನುಡಿದ ಭವಿಷ್ಯ
ಜಲಾನ್, ಝೂನ್ಸಿ (ಉ.ಪ್ರ) ಪಿಟಿಐ, ಫೆ 19: ಏಳು ಹಂತದ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯ ಮೂರನೇ ಹಂತದ ಚುನಾವಣೆ ಭಾನುವಾರ (ಫೆ 19) ಮುಕ್ತಾಯಗೊಂಡಿದೆ. ಜೊತೆಗೆ, ಪ್ರಧಾನಿ ಮೋದಿ ವಿರುದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಕ್ ಪ್ರಹಾರ ಮುಂದುವರಿದಿದೆ. ಬಿಹಾರದಲ್ಲಿ ಆದಂತಹ ಪರಿಸ್ಥಿತಿ ಬಿಜೆಪಿಗೆ ಉತ್ತರಪ್ರದೇಶದಲ್ಲಿ ಮುಂದುವರಿಯಲಿದೆ, ಇಲ್ಲಿನ ಚುನಾವಣೆಯ ಫಲಿತಾಂಶ ಹೊರಬಿದ್ದ ಮೇಲೆ, ಇನ್ನೆರಡು,

ಇನ್ಮುಂದೆ ಪೋಸ್ಟ್ ಆಫೀಸ್`ಗಳಲ್ಲೇ ಸಿಗಲಿದೆ ಪಾಸ್ ಪೋರ್ಟ್
ಮಹಾರಾಷ್ಟ್ರದ ಪೋಸ್ಟ್ ಆಫೀಸ್`ಗಳು ಸದ್ಯದಲ್ಲೇ ಬಹುಉಪಯೋಗಿ ಕೇಂದ್ರಗಳಾಗಿ ಬದಲಾಗಲಿವೆ. ಇಲ್ಲಿ ಕೇವಲ ಕಾಗದ ಪತ್ರಗಳು ಮಾತ್ರ ದೊರೆಯುವುದಿಲ್ಲ. ಆಧಾರ್ ಕಾರ್ಡ್, ಪಾಸ್ ಪೋರ್ಟ್, ವೋಟರ್ ಐಡಿ ಸಹ ಇಲ್ಲೇ ಸಿಗಲಿವೆ.

ನರಗುಂದದಲ್ಲಿ ರೈತ ಹುತಾತ್ಮ ದಿನ

ನರಗುಂದ: ಮಹದಾಯಿ ಹೋರಾಟ ವೇದಿಕೆ ಹಾಗೂ ವಿವಿಧ ರೈತಪರ ಸಂಘಟನೆಗಳು ನರಗುಂದ ಪಟ್ಟಣದಲ್ಲಿ ಗುರುವಾರ ರೈತ ಹುತಾತ್ಮ ದಿನ ಆಚರಿಸುತ್ತಿವೆ.

ಹುತಾತ್ಮ ರೈತರಾದ ವೀರಪ್ಪ ಬಸಪ್ಪ ಕಡಲಿಕೊಪ್ಪ ಮತ್ತು ರಾಮಣ್ಣ ತಹಶೀಲ್ದಾರ್‌ ಅವರ ಭಾವಚಿತ್ರಕ್ಕೆ ಅವರ ಕುಟುಂಬದ ಸದಸ್ಯರು ಪೂಜೆ ಸಲ್ಲಿಸಿದರು.

36 ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಇನ್ನೂ ನೀರು ಬಾರದಿರುವ ಬಗ್ಗೆ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.