Bollywood Finance Sports Technology Andhra Tamilnadu Karnataka Kerala  
search
Karnataka Home

ThatsKannada Kannada News

ThatsKannada Kannada News - ಕನ್ನಡ ವಾರ್ತೆಗಳು  

ಕನ್ನಡ ವಾರ್ತೆಗಳುThatsKannada News Thats Kannada News ThatsKannada news headlines ThatsKannada top stories ThatsKannada news in Kannada
Share    
  ಕಿರುಕುಳದಿಂದ ಬೇಸತ್ತ ಪತ್ನಿ ಗಂಡನನ್ನೇ ಜಜ್ಜಿ ಹಾಕಿದಳು
  ಬೆಂಗಳೂರು, ಮೇ 22: ಹೆಣ್ಣು ಮಕ್ಕಳು ತಮ್ಮ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ ಎಂಬುದಲ್ಲೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಕುಡಿದು ಬಂದು ಜಗಳ ಮಾಡುತ್ತಿದ್ದ ಪತಿಯನ್ನು ಪತ್ನಿಯೇ ಹತ್ಯೆಗೈದು ನಾಪತ್ತೆಯಾಗಿದ್ದಾಳೆ. ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೂಲತಃ ಆಂಧ್ರ ಪ್ರದೇಶದವನಾದ ವಿಜಯ್‌ಕುಮಾರ್ (45) ಎಂಬಾತ ಪತ್ನಿಯಿಂದಲೇ ಹತ್ಯೆಯಾಗಿದ್ದಾನೆ. ಗಾರೆ
  ಜೂನ್ 1ರ ನಂತರ ಸಿ.ಇ.ಟಿ. ಪರೀಕ್ಷೆ ಫಲಿತಾಂಶ
  ಬೆಂಗಳೂರು, ಮೇ 22 : ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ.ಇ.ಟಿ.) ಪರೀಕ್ಷೆ ಫಲಿತಾಂಶವನ್ನು ಜೂನ್ 1ರ ನಂತರ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವರ ಕಿಮ್ಮನೆ ರತ್ನಾಕರ್ ಅವರು ಪ್ರಕಟಿಸಿದ್ದಾರೆ. ಈ ಮೊದಲು ಮೇ 26ರಂದು ಸಿಇಟಿ ಫಲಿತಾಂಶ ಪ್ರಕಟವಾಗಬೇಕಿತ್ತು.ದ್ವಿತೀಯ ಪಿಯುಸಿ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಗೊಂದಲಗಳು ಉದ್ಭವವಾಗಿರುವ ಕಾರಣ, ಮರುಮೌಲ್ಯ ಮಾಪನಕ್ಕಾಗಿ
  ಸಚಿನ್, ದ್ರಾವಿಡ್, ಲಕ್ಷ್ಮಣ್, ಗಂಗೂಲಿಗೆ ಭರ್ಜರಿ ಉಡುಗೊರೆ
  ಚೆನ್ನೈ, ಮೇ.22: ಕ್ರಿಕೆಟ್ ಲೋಕದ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಭರ್ಜರಿ ಉಡುಗೊರೆ ನೀಡುತ್ತಿದೆ. ಬಿಸಿಸಿಐ ವಿತ್ತ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದ್ದು, ನಾಲ್ವರು ಮಾಜಿ ಆಟಗಾರರಿಗೆ ತಲಾ 1.5 ಕೋಟಿ ರು ಗೌರವ ಧನ ನೀಡಲು
  ನಟ ಸುರೇಶ್ ಗೋಪಿಗೆ ಮೋದಿ ಕಡೆಯಿಂದ ಗಿಫ್ಟ್
  ನವದೆಹಲಿ, ಮೇ.22: ಮಲೆಯಾಳಂ ನಟ, ಗಾಯಕ, ನಿರೂಪಕ ಸುರೇಶ್ ಗೋಪಿ ಅವರಿಗೆ ಕೊನೆಗೂ ನರೇಂದ್ರ ಮೋದಿ ಸರ್ಕಾರ ದಿಂದ ಭರ್ಜರಿ ಉಡುಗೊರೆ ಸಿಕ್ಕಿದೆ. ಲಭ್ಯ ಮಾಹಿತಿ ಪ್ರಕಾರ ನ್ಯಾಷನಲ್ ಫಿಲಂ ಡೆವಲ್ಪ್ ಮೆಂಟ್ ಕಾರ್ಪೊರೇಷನ್ (ಎನ್ಎಫ್ ಡಿಸಿ) ಚೇರ್ಮನ್ ಆಗಿ ಸುರೇಶ್ ಗೋಪಿ ನೇಮಕ ಬಹುತೇಕ ಖಚಿತವಾಗಿದೆ. ಇತ್ತೀಚಿಗೆ ಸುರೇಶ್ ಗೋಪಿ ಅವರು ಕೇಂದ್ರ ವಾರ್ತಾ
  ಸೌದಿಯಲ್ಲಿ ಬಾಂಬ್ ಸ್ಫೋಟ, ಶುಕ್ರವಾರ ಮಸೀದಿಯಲ್ಲಿ ರಕ್ತದೋಕುಳಿ
  ರಿಯಾದ್, ಮೇ. 22 : ಶುಕ್ರವಾರ ನಮಾಜ್ ನಡೆಯುತ್ತಿದ್ದಾಗಲೇ ಸೌದಿ ಅರೇಬಿಯಾದ ಮಸೀದಿಯೊಂದರಲ್ಲಿ ಭೀಕರ ಬಾಂಬ್ ಸ್ಫೋಟ ಸಂಭವಿಸಿದ್ದು, ಹಲವಾರು ಜನರು ಸತ್ತಿರಬಹುದು ಎಂದು ಶಂಕಿಸಲಾಗಿದೆ. ಪಶ್ಚಿಮ ಸೌದಿ ಅರೇಬಿಯಾದ ಅಲ್-ಕತಿಫ್ ಪ್ರಾಂತ್ಯದಲ್ಲಿರುವ ಅಲ್-ಕುದಾಯ್ ಗ್ರಾಮದಲ್ಲಿ ಶುಕ್ರವಾರ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಆಂತರಿಕ ವ್ಯವಹಾರ ಮಂತ್ರಾಲಯ ತಿಳಿಸಿದೆಯೆಂದು ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿದೆ.
  ಹೈದರಾಬಾದ್ : ಎಟಿಎಂನಲ್ಲಿ ಗುಂಡು ಹಾರಿಸಿದವ ಸಿಕ್ಕಿಬಿದ್ದ
  ಹೈದರಾಬಾದ್, ಮೇ 22 : ಹೈದರಾಬಾದ್‌ನಲ್ಲಿ ಎಸ್‌ಬಿಐ ಬ್ಯಾಂಕ್ ಎಟಿಎಂನಲ್ಲಿ ಗುಂಡು ಹಾರಿಸಿ ಮಹಿಳೆಯಿಂದ ಹಣ, ಚಿನ್ನಾಭರಣ ದೋಚಿದ್ದ ಆರೋಪಿ ಒಂದೇ ದಿನದಲ್ಲಿ ಸಿಕ್ಕಿಬಿದ್ದಿದ್ದಾನೆ. ಹೊಟ್ಟೆ ಪಾಡಿಗಾಗಿ ನಗರಕ್ಕೆ ಬಂದಿದ್ದ ವ್ಯಕ್ತಿ ಈ ದರೋಡೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಹೈದರಾಬಾದ್‌ನ ಯೂಸೂಫ್‌ಗಢ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ 8 ಗಂಟೆಗೆ ಎಸ್‌ಬಿಐ ಎಟಿಎಂಗೆ ನುಗ್ಗಿದ ವ್ಯಕ್ತಿ
  ನಟ ಅಮಿತಾಬ್ ಸಮೀಪದಲ್ಲೇ ಶೂಟೌಟ್, ಒಬ್ಬ ಬಲಿ
  ಮುಂಬೈ, ಮೇ.22: ಇಲ್ಲಿನ ಫಿಲಂ ಸಿಟಿಯಲ್ಲಿ ಚಿತ್ರೀಕರಣದಲ್ಲಿ ನಿರತರಾಗಿದ್ದ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ಸಮೀಪದಲ್ಲೇ ಶೂಟೌಟ್ ನಡೆದಿದೆ. ರಾಜು ಶಿಂಧೆ ಎಂಬ ಸೆಕ್ಯುರಿಟಿ ಏಜೆನ್ಸಿ ಮುಖ್ಯಸ್ಥನನ್ನು ಗುರಿಯಾಗಿಸಿಕೊಂಡು ಆಗುಂತಕರು ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಒಬ್ಬ ವ್ಯಕ್ತಿ ಮೃತನಾಗಿದ್ದಾನೆ. ಘಟನೆ ಬಗ್ಗೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿರುವ ಅಮಿತಾಬ್
  ಪಿಯುಸಿ ಮೌಲ್ಯಮಾಪನದಲ್ಲಿ ನಿಜಕ್ಕೂ ಲೋಪವಾಗಿದೆಯೇ?
  ಬೆಂಗಳೂರು, ಮೇ 22 : ನಮಗೆ ಕಡಿಮೆ ಅಂಕ ಬಂದಿದೆ. ಮೌಲ್ಯ ಮಾಪನದಲ್ಲಿ ಎಡವಟ್ಟಾಗಿದೆ ಎಂದು ಮಾಧ್ಯಮಗಳ ಮುಂದೆ ಆರೋಪ ಮಾಡಿದ್ದವರ ನೋಂದಣಿ ಸಂಖ್ಯೆಯನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕರೆದಾಗ ಯಾರೂ ಎದುರಿಗೆ ಬರಲಿಲ್ಲ. ಪಿಯುಸಿ ಮೌಲ್ಯಮಾಪನದ ಗೊಂದಲಕ್ಕೆ ಮಲ್ಲೇಶ್ವರಂನ ಪಿಯು ಬೋರ್ಡ್‌ ಶುಕ್ರವಾರ ಸಾಕ್ಷಿಯಾಗಿ ನಿಂತಿತ್ತು. ಧಿಕ್ಕಾರ ಕೂಗುತ್ತ ಬಂದವರು ಪೆಚ್ಚು
  ಐಪಿಎಲ್ ಬೆಟ್ಟಿಂಗ್ : 'ಇಡಿ' ದೇಶದ ಹಲವೆಡೆ ದಾಳಿ
  ನವದೆಹಲಿ, ಮೇ 22: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬೆಟ್ಟಿಂಗ್ ದಂಧೆ ಹತ್ತಿಕ್ಕಲು ಜಾರಿ ನಿರ್ದೇಶನಾಲಯ ಪಣ ತೊಟ್ಟಂತೆ ಕಾರ್ಯ ನಿರ್ವಹಿಸುತ್ತಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ದೇಶದ ಹಲವೆಡೆ ಏಕಕಾಲಕ್ಕೆ ದಾಳಿ ನಡೆಸಿ ಹಲವಾರು ಬುಕ್ಕಿಗಳನ್ನು ಬಂಧಿಸಿದ್ದಾರೆ. ದೆಹಲಿ, ಜೈಪುರ, ಮುಂಬೈ ಸೇರಿದಂತೆ ಹಲವು ನಗರಗಳ ಕೆಲವು ನಿರ್ದಿಷ್ಟ ಸ್ಥಳಗಳ ಮೇಲೆ ದಾಳಿ ಮಾಡಿದ
  ಪಾಕಿಸ್ತಾನ: 6 ವರ್ಷಗಳ ನಂತರ ಮತ್ತೆ ಕ್ರಿಕೆಟ್ ಆರಂಭ
  ಲಾಹೋರ್, ಮೇ 21: ತೀವ್ರ ಎಚ್ಚರಿಕೆ ನಡುವೆಯೂ ದಿಟ್ಟತನ ತೋರಿ ಕ್ರಿಕೆಟ್ ಪಂದ್ಯ ಆಯೋಜಿಸಿರುವ ಪಿಸಿಬಿ ಧೈರ್ಯ ಮೆಚ್ಚಲೇಬೇಕು. ಜೊತೆಗೆ ಯುದ್ಧಭೂಮಿಯಂತಿರುವ ಪಾಕ್ ನೆಲದಲ್ಲಿ ಕ್ರಿಕೆಟ್ ಆಡಲು ಬಂದಿರುವ ಜಿಂಬಾಬ್ವೆ ತಂಡ ಸ್ಥೈರ್ಯಕ್ಕೆ ಶಭಾಷ್. ಸುಮಾರು 6 ವರ್ಷಗಳ ನಂತರ ಶುಕ್ರವಾರದಂದು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದು ನಡೆಯುತ್ತಿದೆ. ಅಂತಾರಾಷ್ಟ್ರೀಯ ಆಟಗಾರರ ಸಂಸ್ಥೆ ಹಾಗೂ ವಿದೇಶಿ ವ್ಯವಹಾರ
  ಬ್ರಿಟಿಷ್ ಮಹಿಳೆ ಬಳಿ ಕ್ಷಮೆ ಯಾಚಿಸಿದ ಭಾರತ
  ಮುಂಬೈ, ಮೇ.22: ಭಾರತ ಪ್ರವಾಸದ ವೇಳೆ ಬ್ರಿಟಿಷ್ ಮಹಿಳೆಗೆ ಉಂಟಾದ ಮುಜುಗರಕ್ಕೆ ಭಾರತದೆಲ್ಲೆಡೆಯಿಂದ ಕ್ಷಮೆಯಾಚನೆ, ಬೆಂಬಲ ಹರಿದು ಬಂದಿದೆ. ಬ್ರಿಟಿಷ್ ಮಹಿಳೆ ಲೂಸಿ ಮುಂಬೈ ಪ್ರವಾಸದ ವೇಳೆ ಪುರುಷನೊಬ್ಬ ಸಾರ್ವಜನಿಕ ಸ್ಥಳದಲ್ಲಿ ಆಕೆ ಮುಂದೆ ಹಸ್ತಮೈಥುನ ಮಾಡಿ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿತ್ತು. ಮುಂಬೈ ಬಸ್ ನಿಲ್ದಾಣದ ಬಳಿ ಅನೇಕ ಪುರುಷರು ತನ್ನತ್ತ ದುರುಗುಟ್ಟಿ ನೋಡುತ್ತಿದ್ದರು.
  ಅಕ್ಟೋಬರ್ ತನಕ ಓಡಲಿದೆ ಹುಬ್ಬಳ್ಳಿ-ಚೆನ್ನೈ ವಿಶೇಷ ರೈಲು
  ಹುಬ್ಬಳ್ಳಿ, ಮೇ 22 : ಹುಬ್ಬಳ್ಳಿ-ಚೆನ್ನೈ ನಡುವೆ ವಾರಕ್ಕೆರಡು ಬಾರಿ ಸಂಚಾರ ನಡೆಸುತ್ತಿದ್ದ ವಿಶೇಷ ರೈಲಿನ ಸೇವೆಯನ್ನು ವಿಸ್ತರಣೆ ಮಾಡಲಾಗಿದೆ. ಜೂನ್‌ 1ರಿಂದ ಅಕ್ಟೋಬರ್‌ 1ರವರೆಗೆ ರೈಲು ಸೇವೆ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಬೇಸಿಗೆಯಲ್ಲಿ ಪ್ರಯಾಣಿಕರ ದಟ್ಟಣೆ ತಪ್ಪಿಸುವ ಉದ್ದೇಶದಿಂದ ನೈರುತ್ಯ ರೈಲ್ವೆಯು ಹುಬ್ಬಳ್ಳಿ-ಚೆನ್ನೈ ನಡುವಿನ ವಿಶೇಷ ರೈಲು ಸಂಚಾರವನ್ನು ಏ.6ರಂದು ಆರಂಭಿಸಿತ್ತು. ನಿಗದಿತ

1 2 3 4 5 6 7 8 9 Next


Tags : thatskannada,Oneindia kannada, one india kannada,thatskannada site,thatskannada portal,thatskannada news,thatskannada.com,oneindia kannada nadu ,thatskannada kannada nadu news, thats kannada,thats kannada news live,thats kannada oneline news,thats kannada portal,thats kannada headlines,thats kannada top news,thats kannada website, thatskannada websiite,kannada nadu news, thatskannada kannada nadu news, thatskannada news,thatskannada live,thatskannada online,kannada people,thatskannada live news

Add ThatsKannada Kannada News to your blog or website