Bollywood Finance Sports Technology Andhra Tamilnadu Karnataka Kerala  
search
Karnataka Home

ThatsKannada Kannada News

ThatsKannada Kannada News - ಕನ್ನಡ ವಾರ್ತೆಗಳು  

ಕನ್ನಡ ವಾರ್ತೆಗಳುThatsKannada News Thats Kannada News ThatsKannada news headlines ThatsKannada top stories ThatsKannada news in Kannada
Share    
  ಬೆಂಗಳೂರುː ಚುಮು ಚುಮು ಚಳಿಗೆ ವರುಣನ ಸಿಂಚನ
  ಬೆಂಗಳೂರು, ನ.13: 'ಅಯ್ಯೋ ಅಂತೂ ಇಂತು ಮಳೆಗಾಲ ಮುಗೀತು' ಎಂದು ನಿಟ್ಟುಸಿರು ಬಿಟ್ಟಿದ್ದ ಬೆಂಗಳೂರ ಜನ ನಿಧಾನವಾಗಿ ಚಳಿಗಾಲಕ್ಕೆ ಹೊಂದಿಕೊಳ್ಳುತ್ತಿದ್ದರು. ಆದರೆ ಸುಮಾರು 15 ದಿನಗಳಿಂದ ಮಾಯವಾಗಿದ್ದ ವರುಣ ಗುರುವಾರ ಬೆಳಗ್ಗೆಯೇ ಹಾಜರಾಗಿದ್ದ.ಗುರುವಾರ ಬೆಂಗಳೂರು ಎಂದಿನಂತೆ ಇರಲಿಲ್ಲ. ಬೆಳಗ್ಗೆಯಿಂದಲೇ ಆರಂಭವಾದ ಜಿಟಿ ಜಿಟಿ ಮಳೆ ಸಂಜೆ ವೇಳೆಗೆ ಜೋರಾಯಿತು. ಅತ್ತ ರಾಜರಾಜೇಶ್ವರಿ ನಗರದ ಬಂಗಾರಪ್ಪ ನಗರದ ಡಾ.
  ಶಬ್ದ ಮಾಲಿನ್ಯಕ್ಕೆ ಸದ್ಯದಲ್ಲೇ ಬೀಳಲಿದೆ ಕಡಿವಾಣ?
  ಬೆಂಗಳೂರು, ನ. 13: ನಗರದಲ್ಲಿ ವಾಹನಗಳು ಮಾಡುವ ಹಾರ್ನ್‌ಗಳಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂಬ ದೂರನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಗಂಭೀರವಾಗಿ ಪರಿಗಣಿಸಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದೆ. ಬೆಂಗಳೂರಿನಲ್ಲಿರುವ ಆಟೋ ಹಾಗೂ ದ್ವಿಚಕ್ರ ವಾಹನಗಳಿಂದಲೇ ಹೆಚ್ಚು ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂಬ ದೂರು ಕೇಳಿಬಂದಿದೆ. ಆದ್ದರಿಂದ ಆಟೋ ಹಾಗೂ ದ್ವಿಚಕ್ರ
  ಮಂಗಳೂರಿನಿಂದ ಬೆಂಗಳೂರಿಗೆ ಪೈಪ್ ಲೈನ್ ಏಕೆ?
  ಚಿಕ್ಕಮಗಳೂರು, ನ.13: ನಿತ್ಯ ಹರಿದ್ವರ್ಣ ಕಾಡುಗಳು, ವಿರಳವಾದರೂ ಕಾಡು ನಂಬಿ ಬದುಕುವ ಜನಸಮೂಹ ನೆಲೆಸಿರುವ ತಾಣಗಳ ಮಧ್ಯೆ ನೀರಿನ ಪೈಪ್ ಹರಿಸುವುದಕ್ಕೆ ಕಳಸದಲ್ಲಿ ಭಾರಿ ಪ್ರತಿರೋಧ ವ್ಯಕ್ತವಾಗಿತ್ತು. ಈಗ ಮಂಗಳೂರು-ಬೆಂಗಳೂರು ನಡುವೆ ಗ್ಯಾಪ್ ಪೈಪ್ ಲೈನ್ ಎಳೆಯುವ ಕ್ರಿಯೆ ಸಾಗುತ್ತ್ತಿದ್ದು, ಪರಿಸರವಾದಿಗಳು ಹೋರಾಟಕ್ಕೆ ಮುಂದಾಗಿದ್ದಾರೆ. ಮೂಡಿಗೆರೆ ಸಮೀಪ ಹಾದು ಹೋಗುವ ಈ ಅನಿಲ ಪೈಪ್ ಅಳವಡಿಕೆಗೆ
  ಆನ್ ಲೈನ್ ಶಾಪಿಂಗ್: ಭರಪೂರ ರಿಯಾಯಿತಿ
  ಬೆಂಗಳೂರು, ನ.13: ವಾರದ ಕೊನೆಯನ್ನು ಶಾಪಿಂಗ್ ನಲ್ಲೇ ಕಳೆಯುವವರಿಗೆ ಇಲ್ಲೊಂದು ಸಂತಸದ ಸುದ್ದಿ. ಅದರಲ್ಲೂ ಆನ್ ಲೈನ್ ಶಾಪಿಂಗ್ ಮಾಡುವವರಿಗೆ ಸುಗ್ಗಿ. ಆದರೆ ಏನೂ ಗೊತ್ತಿಲ್ಲದೇ ಆನ್ ಲೈನ್ ನಲ್ಲಿ ಹುಡುಕುತ್ತಾ ಸಮಯ ಮತ್ತು ಶ್ರಮ ವ್ಯರ್ಥ ಮಾಡಿಕೊಳ್ಳುವವರು ಇದನ್ನು ಓದಲೇಬೇಕು. ನೀವು ಆರ್ಡರ್ ಮಾಡಿದ ವಸ್ತು ನಿಮ್ಮ ಮನೆ ಬಾಗಿಲಿಗೆ ಬಂದು ಬೀಳುತ್ತದೆ, ಈ
  ಕರ್ನಾಟಕದ ಮಾರುಕಟ್ಟೆಗೆ ಬ್ಲ್ಯಾಕ್ ಪೆಲಿಕನ್
  ಬೆಂಗಳೂರು, ನ.13: ಜಾನ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್ (ಜೆಡಿಪಿಎಲ್) ಸಮೂಹದ ಬ್ಲ್ಯಾಕ್ ಪೆಲಿಕಾನ್, ಕರ್ನಾಟಕ ಮಾರುಕಟ್ಟೆಯಲ್ಲಿ ಬ್ರಾಂಡೆಡ್ ಪ್ಯಾಕೇಜ್ಡ್ ಕುಡಿಯುವ ನೀರು ಪರಿಚಯಿಸಲು ಲಕ್ಷ್ಮಿ ಮಿನರಲ್ಸ್ ಜತೆ ಕೈಜೋಡಿಸಿದೆ. ತನ್ನ ಬ್ರಾಂಡ್ ಅನ್ನು ಪ್ರಚುರಪಡಿಸುವ ಸಲುವಾಗಿ ಇದು ಕಂಪನಿಯ ಮೊದಲ ಸಹಭಾಗಿತ್ವವಾಗಿದೆ. ಜೆಡಿಪಿಎಲ್ ನ ಗುಣಮಟ್ಟದ ಖಾತ್ರಿಯೊಂದಿಗೆ ಬ್ಲ್ಯಾಕ್ ಪೆಲಿಕಾನ್ ಪ್ಯಾಕೇಜ್ಡ್ ಕುಡಿಯುವ ನೀರು ಬರುತ್ತಿದೆ.
  ಪೆಟ್ರೋಲ್ ಡೀಸೆಲ್ ದರ ಹೆಚ್ಚಳː ಸುಳ್ಳು ಸುದ್ದಿ
  ನವದೆಹಲಿ, ನ.13: ಪೆಟ್ರೋಲ್ ಮತ್ತು ಡೀಸೆಲ್ ದರ ಲೀಟರ್ ಗೆ 1.50 ರೂ ಏರಿಕೆ ಮಾಡಲಾಗಿದೆ ಎಂಬ ಸುದ್ದಿ ಸುಳ್ಳಾಗಿದೆ. ಹೆಚ್ಚಾಗಿರುವ ಅಬಕಾರಿ ಸುಂಕವನ್ನು ಸರಿದೂಗಿಸಿಕೊಳ್ಳಲು ತೈಲ ಬೆಲೆ ಹೆಚ್ಚಳವಾಗಿದೆ ಎಂಬ ಸುದ್ದಿ ಗುರುವಾರ ಮಧ್ಯಾಹ್ನ ಹರಿದಾಡಿತ್ತು. ತೈಲ ಬೆಲೆಯಲ್ಲಿ ಯಾವುದೇ ಏರಿಕೆಯಿಲ್ಲ. ಅಬಕಾರಿ ಸುಂಕ ಹೆಚ್ಚಳ ಮಾಡಿದ್ದಕ್ಕೆ ಏಕಾಏಕಿ ಇಂಧನ ಬೆಲೆ ಏರಿಸಲು
  ಜೆಡಿಎಸ್ ರಾಜ್ಯಾಧ್ಯಕ್ಷರಾದ ಕುಮಾರಸ್ವಾಮಿ ಹೇಳಿದ್ದಿಷ್ಟು
  ಬೆಂಗಳೂರು, ನ.13 : 'ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿವೆ. ಲೋಪದೋಷಗಳನ್ನು ಸರಿಪಡಿಸಿಕೊಂಡು ತಳಮಟ್ಟದಿಂದ ಪಕ್ಷವನ್ನು ಸಂಘಟಿಸುವುದು ತಮ್ಮ ಮುಂದಿರುವ ಗುರಿ' ಎಂದು ಜೆಡಿಎಸ್‍ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಗುರುವಾರ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿವೆ ಅವೆಲ್ಲವನ್ನೂ ಸರಿಪಡಿಸಿಕೊಂಡು ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು, ಶಾಸಕರನ್ನು ವಿಶ್ವಾಸಕ್ಕೆ
  ಸಿಂಗಪುರದಲ್ಲಿ ಬೆಳಗಿದ ನಾಡೋತ್ಸವ-ದೀಪೋತ್ಸವ
  ಕರುನಾಡ ಪ್ರತಿಭಾನ್ವಿತ ಕುಡಿಗಳು ಕಲಾ ನೈಪುಣ್ಯತೆಯಿಂದ ಬಹಳಷ್ಟು ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳನ್ನು ಹೊತ್ತು ನಾಡಿನಾದ್ಯಂತ ಹೆಸರುವಾಗಿದ್ದಾರೆ. ದೇಶ ವಿದೇಶಗಳಲ್ಲಿ ತಮ್ಮದೇ ಆದಂತಹ ವಿಶೇಷ ಶೈಲಿಯಲ್ಲಿ 'ಹಚ್ಚೇವು ಕನ್ನಡದ ದೀಪ' ಎಂದು ಸಾರುತ್ತಾ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸುತ್ತಿದ್ದಾರೆ. ಸಿಂಗಪುರದಲ್ಲಿಯೂ ಸಹ ಅಂತಹ ಒಂದು ಪ್ರತಿಭೆಗಳ ಸಮ್ಮಿಲನದಿಂದ ಕನ್ನಡ ರಾಜ್ಯೋತ್ಸವವು ಹಾಸ್ಯ, ಗಾಯನಗಳ ಸಂಭ್ರಮದಲ್ಲಿ ಮೊಳಗಿತು. ಕನ್ನಡ
  ಸ್ವಚ್ಛತೆ ಬೋಧಿಸಿದವರು ವಿಷ ಹರಡುತ್ತಿದ್ದಾರೆ: ರಾಹುಲ್
  ನವದೆಹಲಿ, ನ. 13: ಲೋಕಸಭೆ ಚುನಾವಣೆಯಲ್ಲಿ ಉಂಟಾದ ಹೀನಾಯ ಸೋಲಿನ ಆಘಾತದಿಂದ ಇನ್ನೂ ಹೊರಬರದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಎನ್‌ಡಿಎ ಸರ್ಕಾರ ದೇಶದಲ್ಲಿ ವಿಷ ಹರಡುತ್ತಿದೆ ಎಂದು ಆರೋಪಿಸಿದ್ದಾರೆ. ಹೀಗೆ ಹೇಳಲು ಅವರು ಆಯ್ದುಕೊಂಡಿದ್ದು ತನ್ನ ಮುತ್ತಾತ, ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ 125ನೇ ಜನ್ಮದಿನಾಚರಣೆ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ವಿಶೇಷ
  ರೋಹಿತ್ ಶರ್ಮ ಭರ್ಜರಿ ದ್ವಿಶತಕ, ಲಂಕಾ ತತ್ತರ
  ಕೋಲ್ಕತ್ತಾ, ನ.13: ಇಲ್ಲಿನ ಈಡೆನ್ ಗಾರ್ಡನ್ ಮೈದಾನದಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧ ರೋಹಿತ್ ಶರ್ಮ ಭರ್ಜರಿ ದ್ವಿಶತಕ ಸಿಡಿಸಿ ರುದ್ರನರ್ತನ ಮಾಡಿದರು. ಬೌಂಡರಿ, ಸಿಕ್ಸರ್ ಗಳ ಸುರಿಮಳೆಗೈದ ರೋಹಿತ್ ಶರ್ಮ ತಮ್ಮ ವೃತ್ತಿ ಬದುಕಿನ ಎರಡನೇ ದ್ವಿಶತಕ ದಾಖಲಿಸುವ ಮೂಲಕ ಸಾಧನೆ ಮಾಡಿದ ಏಕೈಕ ಕ್ರಿಕೆಟರ್ ಎಂಬ ಕೀರ್ತಿಗೆ ಪಾತ್ರರಾದರು. ಇದಲ್ಲದೆ, ಏಕದಿನ ಕ್ರಿಕೆಟ್ ನಲ್ಲಿ
  ಐಸಿಸಿ ವಿಶ್ವಕಪ್ ಗೆ ವಿರಾಟ್ ಕೊಹ್ಲಿ ಅಂಬಾಸಿಡರ್
  ದುಬೈ, ನ.13: ಮುಂಬರುವ 2015ರ ಐಸಿಸಿ ವಿಶ್ವಕಪ್ ಅಂಬಾಸಿಡರ್ ಆಗಿ ಭಾರತದ ವಿರಾಟ್ ಕೊಹ್ಲಿ ನೇಮಕವಾಗಿದ್ದಾರೆ. ಕೊಹ್ಲಿಯೊಂದಿಗೆ ಆಸ್ಟ್ರೇಲಿಯಾ ವೇಗಿ ಮಿಚೆಲ್ ಜಾನ್ಸನ್, ಆಲ್ ರೌಂಡರ್ ಶೇನ್ ವಾಟ್ಸನ್, ನ್ಯೂಜಿಲೆಂಡ್ ನಾಯಕ ಬ್ರೆಂಡನ್ ಮಕ್ ಲಮ್ ಮತ್ತು ಶ್ರೀಲಂಕಾದ ಕುಮಾರ್ ಸಂಗಕ್ಕಾರ ನೇಮಕವಾಗಿದ್ದಾರೆ. ಗುರುವಾರ ಮಾಹಿತಿ ನೀಡಿದ ಐಸಿಸಿ, ಅಂಬಾಸಿಡರ್ ಗಳು ಸಾಮಾಜಿಕ ಕಾರ್ಯಗಳಲ್ಲಿ
  ‘ರೋಟರಿ-ಕಸಾಪ ಕಾವ್ಯ ಪ್ರಶಸ್ತಿ’ಗೆ ಕವನ ಸಂಕಲನ ಆಹ್ವಾನ
  ಕುಮಟಾ, ನ.13: ಕನ್ನಡ ಸಾಹಿತ್ಯ ಪರಿಷತ್ತು ನೂರರ ಸಂಭ್ರಮವನ್ನು ಆಚರಿಸುವ ಸಂದರ್ಭದಲ್ಲಿ ಇಲ್ಲಿನ ತಾಲ್ಲೂಕ್ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ರೋಟರಿ ಕ್ಲಬ್ ವಿಶೇಷವಾಗಿ ಪ್ರಥಮ ಬಾರಿಗೆ ಉದಯೋನ್ಮುಖ ಕವಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಷ್ಟ್ರ ಮಟ್ಟದ ‘ರೋಟರಿ-ಕಸಾಪ ಕಾವ್ಯ ಪ್ರಶಸ್ತಿ' ಸ್ಥಾಪಿಸಿದ್ದು ಪ್ರಶಸ್ತಿಗಾಗಿ ಕವನ ಸಂಕಲನವನ್ನು ಆಹ್ವಾನಿಸಿದೆ. ಪ್ರಶಸ್ತಿಯು 10,000 ರೂ.ನಗದು, ಫಲಕ, ಪ್ರಶಸ್ತಿTags : thatskannada,Oneindia kannada, one india kannada,thatskannada site,thatskannada portal,thatskannada news,thatskannada.com,oneindia kannada nadu ,thatskannada kannada nadu news, thats kannada,thats kannada news live,thats kannada oneline news,thats kannada portal,thats kannada headlines,thats kannada top news,thats kannada website, thatskannada websiite,kannada nadu news, thatskannada kannada nadu news, thatskannada news,thatskannada live,thatskannada online,kannada people,thatskannada live news

Add ThatsKannada Kannada News to your blog or website