Karnataka Home - ಕನ್ನಡ - ಪ್ರಜಾವಾಣಿ - ರಾಜ್ಯದಲ್ಲೂ ರೈತ ಸುರಕ್ಷಾ ಯೋಜನೆ

ರಾಜ್ಯದಲ್ಲೂ ರೈತ ಸುರಕ್ಷಾ ಯೋಜನೆ


21 July 2016 02:57

ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರದ 2016ರ ಮುಂಗಾರು ಹಂಗಾಮಿನ ‘ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಬಿಮಾ(ವಿಮಾ) ಯೋಜನೆ’ಯನ್ನು ರಾಜ್ಯದಲ್ಲೂ ಅನುಷ್ಠಾನಗೊಳಿಸಲಾಗುತ್ತಿದೆ.

ಪ್ರಕೃತಿ ವಿಕೋಪಗಳಾದ ಅಲಿಕಲ್ಲು ಮಳೆ, ಭೂ ಕುಸಿತ, ಬೆಳೆ ಮುಳುಗುಡೆ ಸೇರಿದಂತೆ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ ಎರಡು ವಾರದೊಳಗಾಗಿ ಚಂಡಮಾರುತ ಅಥವಾ ಅಕಾಲಿಕ ಮಳೆಯಿಂದ ಬೆಳೆ ನಷ್ಟವಾದಲ್ಲಿ ಪರಿಹಾರ ನೀಡಲಾಗುವುದು.

ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರು ಈ   ವಿಮಾ ಯೋಜನೆಯಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ.

ಮುಸುಕಿನ ಜೋಳ, ತೋಗರಿ, ಹುರುಳಿ, ನೆಲಗಡಲೆ ಮತ್ತು ಅವರೆ ಬೆಳೆಗಳಿಗೆ ವಿಮೆಯನ್ನು ಮಾಡಿಸಬಹುದಾಗಿದೆ. ವಿಮೆಗಾಗಿ ಬ್ಯಾಂಕುಗಳಲ್ಲಿ ಅರ್ಜಿ ಸಲ್ಲಿಸಲು ಜು.30 ರಂದು ಕೊನೆಯ ದಿನವಾಗಿದೆ.

ವಿಮೆ ನೋಂದಾಯಿಸಿಕೊಳ್ಳುವ ರೈತರು ಕಡ್ಡಾಯವಾಗಿ ಆದಾರ್‌ ಸಂಖ್ಯೆಯನ್ನು ನೀಡಬೇಕು ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ತಿ.ತಿಮ್ಮೇಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

.
ರಾಜ್ಯದಲ್ಲೂ ರೈತ ಸುರಕ್ಷಾ ಯೋಜನೆ. This article is published at 21 July 2016 02:57 from Prajavani kannada Newspaper, click on the read full article link below to see further details.


Read Full Article on ಪ್ರಜಾವಾಣಿ >>

Tags : ರಾಜ್ಯದಲ್ಲೂ, ಸುರಕ್ಷಾ, ಯೋಜನೆPrajavani, kannada, Newspaper, news, 2436989


Share